Sunday, September 24, 2023
Homeಕ್ರೈಂಶಾಲೆಗೆ ಲೆಗ್ಗಿನ್ಸ್​ ಧರಿಸಿಬಂದ ಶಿಕ್ಷಕಿ ಜೊತೆ ಅನುಚಿತವಾಗಿ ವರ್ತಿಸಿದ ಮುಖ್ಯಶಿಕ್ಷಕಿ!

ಶಾಲೆಗೆ ಲೆಗ್ಗಿನ್ಸ್​ ಧರಿಸಿಬಂದ ಶಿಕ್ಷಕಿ ಜೊತೆ ಅನುಚಿತವಾಗಿ ವರ್ತಿಸಿದ ಮುಖ್ಯಶಿಕ್ಷಕಿ!

- Advertisement -



Renault

Renault
Renault

- Advertisement -

ಮಲಪ್ಪುರಂ, ಡಿಸೆಂಬರ್ 03: ಲೆಗ್ಗಿನ್ಸ್​ ಧರಿಸಿಬಂದು ಪಾಠ ಮಾಡುತ್ತಿದ್ದ ಶಿಕ್ಷಕಿಯ ಜೊತೆ ಅನುಚಿತವಾಗಿ ನಡೆದುಕೊಂಡ ಮುಖ್ಯಶಿಕ್ಷಕಿಯ ವಿರುದ್ಧ ದೂರು ದಾಖಲಾಗಿದೆ.

ಮಲಪ್ಪುರಂ ಜಿಲ್ಲೆಯ ಎಡಪಟ್ಟದಲ್ಲಿರುವ ಸಿಕೆಎಚ್​ಎಂ ಸರ್ಕಾರಿ ಉನ್ನತ ಮಾಧ್ಯಮಿಕ ಶಾಲೆಯ ಶಿಕ್ಷಕಿ ಸರಿತಾ ರವೀಂದ್ರನಾಥ್​ ಎಂಬುವರು ಜಿಲ್ಲಾ ಶಿಕ್ಷಣಾಧಿಕಾರಿಗೆ ದೂರು ದಾಖಲಿಸಿದ್ದಾರೆ.

ಅಂದಹಾಗೆ ಸರಿತಾ ಅವರು ಕೇವಲ ಶಿಕ್ಷಕಿ ಮಾತ್ರವಲ್ಲ, ಮಿಸಸ್​ ಕೇರಳ ವಿಜೇತೆಯು ಆಗಿದ್ದಾರೆ.

ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಸರಿತಾ ಸೇವೆ ಸಲ್ಲಿಸುತ್ತಿದ್ದಾರೆ. ದೂರಿನಲ್ಲಿರುವ ಪ್ರಕಾರ ಲಗ್ಗಿನ್ಸ್​ ಧರಿಸಿ ಬಂದಿದ್ದ ಸರಿತಾ ಮುಖ್ಯಶಿಕ್ಷಕಿ ರಾಮಲತಾ ಕಚೇರಿಗೆ ಸಹಿ ಹಾಕಲು ತೆರಳಿದಾಗ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ನೀವು ಲೆಗ್ಗಿನ್ಸ್​ ಧರಿಸಿ ಬರುವುದರಿಂದ ಶಾಲೆಯ ಹೆಣ್ಣು ಮಕ್ಕಳು ಕೂಡ ಸರಿಯಾಗಿ ಉಡುಗೆ ತೊಡುವುದಿಲ್ಲ ಸರಿತಾರ ವಿರುದ್ಧ ಕಿಡಿಕಾರಿದ್ದಾರೆ.

ಸರಿತಾ ಅವರು ಈ ರೀತಿಯ ಉಡುಗೆ ಧರಿಸಿ ಬರುವಾಗ ಸರಿಯಾಗಿ ಬಟ್ಟೆ ಧರಿಸುವಂತೆ ಮಕ್ಕಳಿಗೆ ಹೇಳುವುದಾದರೂ ಹೇಗೆ ಎಂದು ರಾಮಲತಾ ಅವರು ಎಲ್ಲರ ಮುಂದೆಯೇ ಹೇಳಿದ್ದಾರೆ. ಇದನ್ನು ತಮಾಷೆಯಾಗಿ ತೆಗೆದುಕೊಂಡ ಸರಿತಾ, ಶಿಕ್ಷಕರ ಬಳಿ ಸಮವಸ್ತ್ರವಿದೆಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ರಾಮಲತಾ, ಸಮಸ್ಯೆ ಇರುವುದು ಸರಿತಾ ಅವರ ಪ್ಯಾಂಟ್​ನಲ್ಲಿ ಮತ್ತು ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಬಟ್ಟೆಯಿಂದ ವ್ಯಕ್ತಿತ್ವವನ್ನು ಅಳೆದಿರುವುದು ಸರಿತಾರ ಅಸಮಾಧಾನಕ್ಕೆ ಕಾರಣವಾಗಿದೆ.

ಹದಿಮೂರು ವರ್ಷಗಳಿಂದ ನಾನು ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಬೋಧನೆಯ ವಿರುದ್ಧ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ದೂರುಗಳಿಲ್ಲ. ಮುಖ್ಯೋಪಾಧ್ಯಾಯರಿಗೂ ಅಂತಹ ಯಾವುದೇ ದೂರುಗಳು ಬಂದಿಲ್ಲ. ಸರ್ಕಾರ ಶಿಕ್ಷಕರಿಗೆ ಯಾವುದೇ ಸಮವಸ್ತ್ರವನ್ನು ನಿಗದಿಪಡಿಸಿಲ್ಲ. ಇಂತಹ ಸಂದರ್ಭದಲ್ಲಿ ಸಭ್ಯ ಉಡುಗೆ ತೊಟ್ಟವರ ವಿರುದ್ಧ ಮಾತನಾಡುವುದು ಅವಮಾನಕರ ಎಂದು ಸರಿತಾ ಬೇಸರ ಹೊರಹಾಕಿದ್ದಾರೆ.

ನಾನು ಸಭ್ಯವಾಗಿಯೇ ಡ್ರೆಸ್ ಹಾಕಿದ್ದೆ, ಅದಕ್ಕಾಗಿಯೇ ಆ ಡ್ರೆಸ್​ನಲ್ಲಿದ್ದ ಫೋಟೋ ತೆಗೆದು ತಾನು ನೀಡಿರುವ ದೂರಿನ ಜೊತೆಗೆ ಲಗತ್ತಿಸಿದ್ದೇನೆ ಎಂದು ಶಿಕ್ಷಕಿ ಹೇಳಿದ್ದಾರೆ. ಶಾಲೆಗೆ ಜೀನ್ಸ್ ಧರಿಸಿದ್ದಕ್ಕಾಗಿ ಯಾವುದೇ ಪುರುಷ ಶಿಕ್ಷಕರನ್ನು ನಿಂದಿಸುವುದನ್ನು ನಾನು ಇದುವರೆಗೂ ನೋಡಿಲ್ಲ ಎಂದು ಸರಿತಾ ಹೇಳಿದರು.

ಶಿಕ್ಷಕರು ಆರಾಮವಾಗಿ ಮತ್ತು ಸಭ್ಯ ಧಿರಿಸಿನಲ್ಲಿ ಶಾಲೆಗೆ ಬರಬಹುದು ಎಂಬ ಕಾನೂನು ಇದೆ. ಇದೀಗ ಈ ಘಟನೆ ನನ್ನನ್ನು ಸಾಕಷ್ಟು ಮಾನಸಿಕ ಯಾತನೆಗೆ ದೂಡಿದೆ. ದೂರಿನ ಬಗ್ಗೆ ಮುಖ್ಯಶಿಕ್ಷಕಿ ರಾಮಲತಾ ಅವರು ಇದುವರೆಗೂ ಸ್ಪಂದಿಸಿಲ್ಲ. ಅಧಿಕಾರಿಗಳು ಸಹ ನನ್ನಿಂದು ಯಾವುದೇ ವಿವರಣೆ ಕೇಳಿಲ್ಲ. ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ಸರಿತಾ ಅಸಮಾಧಾನ ಹೊರಹಾಕಿದ್ದಾರೆ.

- Advertisement -

2 COMMENTS

  1. ಶಾಲಾ ಶಿಕ್ಷಕರಿಗೆ ಸೀರೆ ಅಥವಾ ಚೂಡಿದಾರ ದಂತಹ ಸಮವಸ್ತ್ರ ಸರಕಾರ ಕಡ್ಡಾಯ ಮಾಡಬೇಕು

  2. ಅನುಚಿತ ವರ್ತನೆ ಎಂದರೆ ಹೇಗೆ….!!!???

    ಇವಳು ಬಂದಿದ್ದು ಶಾಲೆಗೋ ಫ್ಯಾಷನ್ ಶೋ ಗೋ…!!!???

LEAVE A REPLY

Please enter your comment!
Please enter your name here

Most Popular

Recent Comments