ಕಿನ್ನಿಗೋಳಿ: (Series Accident) ಗಾಂಜಾ ನಶೆಯಲ್ಲಿದ್ದ ಚಾಲಕನೋರ್ವ ವಾಹನ ಚಲಾಯಿಸಿ ಸರಣಿ ಅಪಘಾತ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಮೂರುಕಾವೇರಿ ಬಳಿ ನಡೆದಿದೆ. ಅಪಘಾತದ ಬೆನ್ನಲ್ಲೇ ವಾಹನ ಸಮೇತ ಚಾಲಕ ಎಸ್ಕೇಪ್ ಆಗಿದ್ದಾನೆ.
ಆದರೆ ಯುವಕರು ಬೈಕಿನಲ್ಲಿ ಬೆನ್ನಟ್ಟಿ ವಾಹನ ತಡೆದು ಚಾಲಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಮೂಡಬಿದ್ರೆ ಹಾಗೂ ಕಿನ್ನಿಗೋಳಿ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಪಿಕಪ್ ವಾಹನ ಚಾಲಕನೊಬ್ಬ ಗಾಂಜಾ ನಶೆಯಲ್ಲಿ ವಾಹನ ಚಲಾಯಿಸುತ್ತಿದ್ದಾನೆ. ಮೂರು ಕಾವೇರಿ ಬಳಿಗೆ ಬರುತ್ತಿದ್ದಂತೆಯೇ ವಾಹನವನ್ನು ಬೈಕ್ ಗೆ ಢಿಕ್ಕಿ (Series Accident) ಹೊಡೆದಿದ್ದಾನೆ. ಅಷ್ಟೇ ಅಲ್ಲದೇ ಕಾರು ಹಾಗೂ ಬಸ್ಸಿಗೆ ಢಿಕ್ಕಿ ಹೊಡೆದಿದ್ದಾನೆ. ಅಪಘಾತದ ಅರಿವಿದ್ದರೂ ಕೂಡ ವಾಹನವನ್ನು ನಿಲ್ಲಿಸದೇ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಆದರೆ ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇನ್ನು ವಾಹನ ಸಮೇತ ಚಾಲಕ ಎಸ್ಕೇಪ್ ಆಗಿರುವುದನ್ನು ಗಮಿಸಿದ ಸ್ಥಳೀಯರು ಬೈಕ್ ಗಳನ್ನು ಹಿಡಿದು ಪಿಕಪ್ ವಾಹನವನ್ನು ಬೆನ್ನಟ್ಟಿದ್ದಾರೆ. ಸುಮಾರು ಹನ್ನೆರಡು ಕಿ.ಮೀ. ದೂರದ ವರೆಗೂ ಪಿಕಪ್ ವಾಹನವನ್ನು ಬೆನ್ನಟ್ಟಿದ್ದಾರೆ. ನಂತರ ಚಾಲಕ ವಾಹನವನ್ನು ನಿಲ್ಲಿಸಿದ್ದಾನೆ. ಈ ವೇಳೆಯಲ್ಲಿ ಸವಾರರು ಆತನನ್ನು ವಾಹನದಿಂದ ಕೆಳಗೆ ಇಳಿಸಿ ಥಳಿಸಿದ್ದಾರೆ.