Friday, February 3, 2023
Homeಕರಾವಳಿತೊಕ್ಕೊಟ್ಟಿನಲ್ಲಿ ರೈಲು ಢಿಕ್ಕಿಯಾಗಿ ಬ್ಯಾಂಕ್ ಉದ್ಯೋಗಿ ಸಾವು

ತೊಕ್ಕೊಟ್ಟಿನಲ್ಲಿ ರೈಲು ಢಿಕ್ಕಿಯಾಗಿ ಬ್ಯಾಂಕ್ ಉದ್ಯೋಗಿ ಸಾವು

- Advertisement -

Renault

Renault
Renault

- Advertisement -

ಉಳ್ಳಾಲ, ಫೆ.14; ರೈಲು ಡಿಕ್ಕಿ ಹೊಡೆದು ಬ್ಯಾಂಕ್ ಉದ್ಯೋಗಿಯೊಬ್ಬ ದಾರುಣ ಸಾವನ್ನಪ್ಪಿದ ಘಟನೆ ತೊಕ್ಕೊಟ್ಟು ಬಳಿ ನಡೆದಿದೆ. 

ಕೋಟೆಕಾರು, ಬೀರಿ ಭಂಡಾರಮನೆ ಬಳಿಯ ನಿವಾಸಿ ಸತೀಶ್ಚಂದ್ರ ನಾಯ್ಕ್ (28) ಮೃತ ಯುವಕನಾಗಿದ್ದು ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ರೈಲು ಹಳಿಯಿಂದ ದೂರಕ್ಕೆ ಎಸೆಯಲ್ಪಟ್ಟ ಸ್ಥಿತಿಯಲ್ಲಿದ್ದು ಶವದ ಮೈಯ ಬಟ್ಟೆ ಹರಿದು ಚಿಂದಿಯಾಗಿದೆ. ಹಳಿ ದಾಟುವಾಗ ರೈಲು ಡಿಕ್ಕಿಯಾಗಿದ್ದು ಎಳಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರು ಮಧ್ಯಾಹ್ನ ಹೊತ್ತಿಗೆ ಶವ ನೋಡಿ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಸತೀಶ್ಚಂದ್ರ ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದು ಸಾಲೆತ್ತೂರು ಶಾಖೆಯಿಂದ ಇತ್ತೀಚೆಗಷ್ಟೆ ಕೊಡಗಿನ ಮಡಿಕೇರಿಗೆ ವರ್ಗಾವಣೆಗೊಂಡಿದ್ದರು. ಇಂದು ವಾರದ ರಜಾ ದಿನ ಆಗಿದ್ದರಿಂದ ನಿನ್ನೆ ಮಡಿಕೇರಿಯಿಂದ ಊರಿಗೆ ಬಂದಿದ್ದರು. ನಿನ್ನೆ ರಾತ್ರಿ 9 ಗಂಟೆಗೆ ಮನೆಗೆ ಬಂದಿದ್ದ ಸತೀಶ್ವಂದ್ರ, ತೊಕ್ಕೊಟ್ಟಿಗೆ ಹೋಗಿದ್ದವರು ಹಿಂತಿರುಗಿ ಬಂದಿರಲಿಲ್ಲ ಎಂದು ಮನೆಯವರು ತಿಳಿಸಿದ್ದಾರೆ.

ಸತೀಶ್ಚಂದ್ರ ಅವಿವಾಹಿತರಾಗಿದ್ದು ತೀವ್ರ ಕುಡಿತದ ಚಟ ಹೊಂದಿದ್ದರೆನ್ನಲಾಗಿದೆ. ನಿನ್ನೆ ರಾತ್ರಿ ಗೆಳೆಯರ ಜೊತೆ ಕುಡಿತದ ಪಾರ್ಟಿ ಮಾಡಿದ್ದ ಸತೀಶ್ವಂದ್ರ, ಮನೆಗೆ ತೆರಳಿರಲಿಲ್ಲ. ರಾತ್ರಿ ಎಲ್ಲಿದ್ದರು ಎನ್ನುವುದು ಗೊತ್ತಾಗಿಲ್ಲ. ಕುಡಿತದ ನಶೆಯಲ್ಲಿ ಇಂದು ಬೆಳಗ್ಗೆ ಹಳಿ ದಾಟುವಾಗ ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ್ದಾಗಿ ಶಂಕಿಸಲಾಗಿದೆ. ರೈಲ್ವೇ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments