Friday, May 14, 2021
Homeಕರಾವಳಿಕೋಮು ಭಾವನೆ ಕೆರಳಿಸುವ ಭಾಷಣ ಮಾಡಿದ ತುಳು ಅಕಾಡೆಮಿ ಅಧ್ಯಕ್ಷರನ್ನು ಮುಖ್ಯಮಂತ್ರಿ ಯವರು ತಕ್ಷಣ ವಜಾಗೊಳಿಸಬೇಕು:...

ಕೋಮು ಭಾವನೆ ಕೆರಳಿಸುವ ಭಾಷಣ ಮಾಡಿದ ತುಳು ಅಕಾಡೆಮಿ ಅಧ್ಯಕ್ಷರನ್ನು ಮುಖ್ಯಮಂತ್ರಿ ಯವರು ತಕ್ಷಣ ವಜಾಗೊಳಿಸಬೇಕು: ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ

- Advertisement -
Rental
Rental
- Advertisement -Home Plus
- Advertisement -
Platform
Maya Builders

ಮಂಗಳೂರು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರು ಮುಸ್ಲಿಂ ಸಮುದಾಯವನ್ನು ನಿಂದಿಸಿ ಮಾಡಿದ ಭಾಷಣ ಅವರ ನಿಜ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದ್ದು ಅವರು ಸರಕಾರದ ಜವಾಬ್ದಾರಿಯುತ ಸ್ಥಾನದಲ್ಲಿ ಇನ್ನು ಯಾವ ಕಾರಣಕ್ಕೂ ಮುಂದುವರಿಯುವುದು ಸರಿಯಲ್ಲ.


ತುಳು ಅಕಾಡೆಮಿ ಎನ್ನುವುದು ಸಮಸ್ತ ತುಳುವರ ವೇದಿಕೆ.
ಕರಾವಳಿ ಪ್ರದೇಶದಲ್ಲಿ ತುಳು ಗೊತ್ತಿಲ್ಲದ ಮುಸ್ಲಿಮರು ಇಲ್ಲ.
ತುಳು ಭಾಷೆಯನ್ನು ಮುಸ್ಲಿಂ ಸಮುದಾಯ ತಮ್ಮ ಒಂದು ಭಾಷೆಯಾಗಿಯೇ ಕಾಣುತ್ತಿದ್ದಾರೆ.
ತುಳು ಅಕಾಡೆಮಿ ಅಧ್ಯಕ್ಷರ ಈ ದ್ವೇಷ ಭಾಷಣ ಮುಸ್ಲಿಮರಿಗೆ ಮಾತ್ರವಲ್ಲ, ಇತರ ಸಮುದಾಯದವರಿಗೂ ನೋವು ತಂದಿದೆ.


ಅತ್ಯಂತ ಬೇಜವಾಬ್ದಾರಿ ಮತ್ತು ಕೋಮು ಭಾವನೆಯನ್ನು ಕೆರಳಿಸಿದ ಕಾರಣ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರು ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ದಯಾನಂದ ಕತ್ತಲ್ ಸಾರ್ ಅವರನ್ನು ತಕ್ಷಣ ವಜಾಗೊಳಿಸಿ ತುಳುವರಿಗೆ ಗೌರವ ನೀಡಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇನೆ.

ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ

ಅಧ್ಯಕ್ಷರು, ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ.

- Advertisement -Hunger

LEAVE A REPLY

Please enter your comment!
Please enter your name here

- Advertisment -

Most Popular

Recent Comments