Tuesday, September 28, 2021
Homeಕ್ರೈಂಕಾರ್ ನಲ್ಲಿ ದನಗಳನ್ನು ಕೈಕಾಲು ಕಟ್ಟಿ ಸಾಗಾಟ…ಕಾರ್ ಅಡ್ಡಗಟ್ಟಿ ಓರ್ವನನ್ನು ಸೆರೆ ಹಿಡಿದ ಪೊಲೀಸ್ ಪಡೆ…

ಕಾರ್ ನಲ್ಲಿ ದನಗಳನ್ನು ಕೈಕಾಲು ಕಟ್ಟಿ ಸಾಗಾಟ…ಕಾರ್ ಅಡ್ಡಗಟ್ಟಿ ಓರ್ವನನ್ನು ಸೆರೆ ಹಿಡಿದ ಪೊಲೀಸ್ ಪಡೆ…

- Advertisement -
Renault
- Advertisement -
Home Plus
- Advertisement -

ಸುಳ್ಯ : ಅಕ್ರಮವಾಗಿ ಎರಡು ದನಗಳನ್ನು ಓಮ್ನಿ ಕಾರೊಂದರಲ್ಲಿ ಸಾಗಾಟ ಮಾಡುತ್ತಿದ್ದಾಗ ಕಾರನ್ನು ಪೊಲೀಸರು ಅಡ್ಡಗಟ್ಟಿ, ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಿನ್ನೆ ತಡರಾತ್ರಿ ಸುಳ್ಯದಲ್ಲಿ ನಡೆದಿದೆ. ಕಾರಿನಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಸಾಗಾಟಗಾರರು ತಪ್ಪಿಸಿಕೊಳ್ಳಲೆತ್ನಿಸಿದ್ದು, ಈ ವೇಳೆ ವಾಹನ ನಗರದ ಜಟ್ಟಿಪಳ್ಳ ಸಮೀಪ ಕಂಪೌಂಡಿಗೆ ಕೂಡಾ ಗುದ್ದಿತ್ತು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಸುಳ್ಯ ಮತ್ತು ಎಸ್. ಐ.ಯವರು ಕಾರನ್ನು ತಡೆಗಟ್ಟಿದಾಗ ಓರ್ವ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ .

ಮೂರು ಮಂದಿ ಕಾರಿನಲ್ಲಿ ದನಗಳನ್ನು ತುಂಬಿಸಿಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ತಿಳಿದು ಪೋಲೀಸರು ಕಾರನ್ನು ಅಡ್ಡಗಟ್ಟಿ ನಿಲ್ಲಿಸಲು ಸೂಚನೆ ನೀಡಿದ್ದು, ಆ ಸಂದರ್ಭದಲ್ಲಿ ಚಾಲಕನು ಕಾರನ್ನು ತಿರುಗಿಸಿ ಮತ್ತೆ ಕಾನತ್ತಿಲ ಕಡೆಗೆ ಹೋಗಲು ಯತ್ನಿಸಿದಾಗ ಮಾರುತಿ ಅಪಾರ್ಟ್ ಮೆಂಟ್ ನ ಕಂಪೌಂಡಿಗೆ ಡಿಕ್ಕಿ ಹೊಡೆಯಿತು. ಚಾಲಕ ಕಾರಿನಿಂದಿಳಿದು ಪರಾರಿಯಾದಾಗ ಕಾರು ಹಿಂಬದಿ ಚಲಿಸಿ ಗೋಡೆಗೆ ತಾಗಿ ನಿಂತಿತು. ಅಷ್ಟರಲ್ಲಿ ಅಲ್ಲಿ ಜಮಾಯಿಸಿದವರು ಆರೋಪಿಗಳನ್ನು ಹಿಡಿಯಲು ಯತ್ನಿಸಿದಾಗ ಮೂವರಲ್ಲಿ ಇಬ್ಬರು ಪರಾರಿಯಾಗಿ ಒಬ್ಬ ಆರೋಪಿ ಸಿಕ್ಕಿಬಿದ್ದಿದ್ದಾನೆ. ಸ್ಥಳದಲ್ಲಿ ಬಜರಂಗದಳದ ಕಾರ್ಯಕರ್ತರು ಮತ್ತು ಸ್ಥಳೀಯರು ಸೇರಿದ್ದರು. ಓಮ್ನಿ ಕಾರನ್ನು ಜಾನುವಾರು ಸಮೇತ ಪೋಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಎರಡು ದನಗಳನ್ನು ಕೈಕಾಲು ಕಟ್ಟಿ ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿತ್ತು.
ಸುಳ್ಯ ಪೋಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments