ನವದೆಹಲಿ : ನಿಮ್ಮ ಬ್ಯಾಂಕ್ ಖಾತೆಯಿದ್ದು, ಅದರಲ್ಲಿ ಹಣ ಇಲ್ಲದಿದ್ದರೂ, ಸುಲಭವಾಗಿ 10 ಸಾವಿರ ರೂ.ಯನ್ನು ಖಾತೆಯಿಂದ ಪಡೆಯಬಹುದು. ಆದರೆ ಇದಕ್ಕಾಗಿ ನೀವು ಜನ್ ಧನ್ ಖಾತೆಯನ್ನು (Janadhan Account) ಹೊಂದಿರಬೇಕು. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ಖಾತೆಯನ್ನು ತೆರೆಯದಿದ್ದರೆ, ಈಗಲೇ ಆ ಕೆಲಸ ಮಾಡಿ.
ಜನ್ ಧನ್ ಯೋಜನೆ ಅಡಿಯಲ್ಲಿ, ಶೂನ್ಯ ಬ್ಯಾಲೆನ್ಸ್‌ನಲ್ಲಿ ಬ್ಯಾಂಕ್ ಖಾತೆಗಳನ್ನು (Zero balance account) ತೆರೆಯಲಾಗುತ್ತದೆ. ಕೇಂದ್ರ ಸರ್ಕಾರದ ಈ ಯೋಜನೆಯು 7 ವರ್ಷಗಳನ್ನು ಪೂರೈಸಿದ್ದು, ಇಲ್ಲಿಯವರೆಗೆ 41 ಕೋಟಿಗೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ. ವಿಮೆ ಸೇರಿದಂತೆ ಹಲವು ರೀತಿಯ ಸೌಲಭ್ಯಗಳು ಈ ಯೋಜನೆಯಲ್ಲಿ ಲಭ್ಯವಿದೆ. ಈ ಸೌಲಭ್ಯಗಳಲ್ಲಿ ಒಂದು ಓವರ್‌ಡ್ರಾಫ್ಟ್ .
10 ಸಾವಿರ ರೂ. ಹೇಗೆ ಸಿಗಲಿದೆ ?
ಜನ್ ಧನ್ ಯೋಜನೆ ಅಡಿಯಲ್ಲಿ, ನಿಮ್ಮ ಖಾತೆಯಲ್ಲಿ ಯಾವುದೇ ಬ್ಯಾಲೆನ್ಸ್ ಇಲ್ಲದಿದ್ದರೂ, ನೀವು 10,000ರೂ. ವರೆಗೆ ಓವರ್‌ಡ್ರಾಫ್ಟ್ (Overdraft) ಸೌಲಭ್ಯ ಇರುತ್ತದೆ. ಈ ಸೌಲಭ್ಯವು ಅಲ್ಪಾವಧಿ ಸಾಲದಂತಿರುತ್ತದೆ. ಮೊದಲು ಈ ಮೊತ್ತ 5 ಸಾವಿರ ರೂ.ಯಾಗಿತ್ತು. ಆದರೆ ಈಗ ಸರ್ಕಾರ ಈ ಓವರ್ ಡ್ರಾಫ್ಟ್ ಮೊತ್ತವನ್ನು 10 ಸಾವಿರಕ್ಕೆ ಹೆಚ್ಚಿಸಲಾಗಿದೆ. ಈ ಖಾತೆಯಲ್ಲಿ ಓವರ್‌ಡ್ರಾಫ್ಟ್ ಸೌಲಭ್ಯಕ್ಕಾಗಿ ಗರಿಷ್ಠ ವಯಸ್ಸಿನ ಮಿತಿ 65 ವರ್ಷಗಳಾಗಿವೆ. ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯಲು, ನಿಮ್ಮ ಜನ್ ಧನ್ ಖಾತೆಯು ಕನಿಷ್ಠ 6 ತಿಂಗಳ ಹಳೆಯದಾಗಿರಬೇಕು. ಇಲ್ಲದಿದ್ದರೆ, 2,000 ರೂ.ವರೆಗಿನ ಮಾತ್ರ ಓವರ್‌ಡ್ರಾಫ್ಟ್ ಪಡೆಯಲು ಸಾಧ್ಯವಾಗುತ್ತದೆ.
ಜನ್ ಧನ್ ಯೋಜನೆಯಡಿಯಲ್ಲಿ ಸಿಗುವ ಸೌಲಭ್ಯಗಳು :
1.ಜನ್ ಧನ್ ಯೋಜನೆ ಅಡಿಯಲ್ಲಿ, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಖಾತೆಯನ್ನು ಸಹ ತೆರೆಯಬಹುದು.
2.ಈ ಯೋಜನೆಯಡಿ ಖಾತೆಯನ್ನು ತೆರೆಯುವಾಗ, ನೀವು ರುಪೇ ಎಟಿಎಂ ಕಾರ್ಡ್ (ATM Card), 2 ಲಕ್ಷ ರೂ ಅಪಘಾತ ವಿಮೆ ರಕ್ಷಣೆ, 30 ಸಾವಿರ ರೂ ಜೀವ ರಕ್ಷಣೆ ಮತ್ತು ಠೇವಣಿ ಮೊತ್ತದ ಮೇಲಿನ ಬಡ್ಡಿ ಪಡೆಯಬಹುದು
3.ಇದರ ಮೇಲೆ 10 ಸಾವಿರ ಓವರ್‌ಡ್ರಾಫ್ಟ್ ಸೌಲಭ್ಯ ಸಿಗಲಿದೆ.
4.ಈ ಖಾತೆಯನ್ನು ಯಾವುದೇ ಬ್ಯಾಂಕಿನಲ್ಲಿ (Bank) ತೆರೆಯಬಹುದು.
5.ಇದರಲ್ಲಿ ನೀವು ಕನಿಷ್ಟ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಾಗಿಲ್ಲ.
Supr
Personal
Yava Bank inda sigutte loan amount
State Bank of India or union bank of india
Ok
Okay
Tailaring
Mecen
Tailaring gaagi Hanada aavasyakathe ed e
10 savira beku
Yavaginda
Business