Sunday, May 28, 2023
HomeಕರಾವಳಿUDUPI: ಮುಸ್ಲಿಮರನ್ನ, ಕ್ರೈಸ್ತರನ್ನ ಘರ್ ವಾಪಸಿ ಮಾಡದೆ ಬೇರೆ ದಾರಿಯಿಲ್ಲ -ಸಂಸದ ತೇಜಸ್ವಿ ಸೂರ್ಯ

UDUPI: ಮುಸ್ಲಿಮರನ್ನ, ಕ್ರೈಸ್ತರನ್ನ ಘರ್ ವಾಪಸಿ ಮಾಡದೆ ಬೇರೆ ದಾರಿಯಿಲ್ಲ -ಸಂಸದ ತೇಜಸ್ವಿ ಸೂರ್ಯ

- Advertisement -


Renault

Renault
Renault

- Advertisement -

ಉಡುಪಿ: ಮುಸ್ಲಿಮರನ್ನ, ಕ್ರೈಸ್ತರನ್ನ ಘರ್ ವಾಪಸಿ ಮಾಡದೆ ಬೇರೆ ದಾರಿಯಿಲ್ಲ ಎಂದು ಉಡುಪಿಯಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ಸಂಬಂಧ ಮಾತನಾಡಿದ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಮತಾಂತರವಾಗಿ ಪಾಕಿಸ್ತಾನಕ್ಕೆ ಹೋದವರನ್ನು ಕರೆತರಬೇಕು. ಪಾಕ್ಗೆ ಹೋದವರನ್ನೂ ಹಿಂದೂ ಧರ್ಮಕ್ಕೆ ಕರೆತರಬೇಕು. ಚೀನಾ, ಜಪಾನ್ಗೆ ಮತಾಂತರಗೊಂಡವರನ್ನ ಕರೆತರಬೇಕು. ಟಿಪ್ಪು ಜಯಂತಿಯಂದೇ ನಾವು ಮರುಮತಾಂತರ ಮಾಡಬೇಕು. ಟಿಪ್ಪುವಿನ ಖಡ್ಗದ ಕಾರಣಕ್ಕೆ ಬಹಳ ಮತಾಂತರಗಳಾಗಿವೆ. ಅಸಾಧ್ಯ ಎಂಬುವುದು ಯಾವುದೂ ಇಲ್ಲ. ನಮ್ಮ ಮನೆ ಪಕ್ಕ, ಗ್ರಾಮಗಳಲ್ಲಿ ಘರ್ ವಾಪಸಿ ಮಾಡಬೇಕು. ನಾವು ದೊಡ್ಡದಾಗಿ ಕನಸನ್ನು ಕಾಣಬೇಕು ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಈ ದೇಶದಲ್ಲಿ ರಾಮಮಂದಿರವನ್ನು ನಿರ್ಮಾಣ ಮಾಡಿದ್ದೇವೆ. ಕಾಶ್ಮೀರದಲ್ಲಿ 370 ಕಾಯ್ದೆಯನ್ನು ತೆಗೆದುಹಾಕಿದ್ದೇವೆ. ಪಾಕ್ ಮುಸಲ್ಮಾನರನ್ನ ಹಿಂದೂಗಳಾಗಿ ಪರಿವರ್ತಿಸಬೇಕು. ಆದ್ಯ ಕರ್ತವ್ಯದ ರೀತಿಯಲ್ಲಿ ಘರ್ ವಾಪಸಿ ಮಾಡಬೇಕು. ಅಖಂಡ ಭಾರತದ ಕಲ್ಪನೆಯಲ್ಲಿ ಪಾಕಿಸ್ತಾನವು ಇದೆ. ಮಠ ದೇವಸ್ಥಾನ ಇದರ ಮುಂದಾಳತ್ವ ವಹಿಸಬೇಕು ಎಂದು ಉಡುಪಿಯಲ್ಲಿ ಪರ್ಯಾಯ ಅದಮಾರು ಮಠದ ವಿಶ್ವರೂಪಂ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಮತಾಂತರ ನಿಷೇಧ ಮಸೂದೆಗೆ ಹಿನ್ನಡೆಯಾಗಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ
ಮತಾಂತರ ನಿಷೇಧ ಮಸೂದೆಗೆ ಹಿನ್ನಡೆಯಾಗಿಲ್ಲ. ವಿಧಾನ ಪರಿಷತ್​ನಲ್ಲಿ ನಮಗೆ ಬೆಂಬಲವಿಲ್ಲ. ಈ ಬಗ್ಗೆ ಸ್ಪಷ್ಟತೆ ಇದೆ. ಹಾಗಾಗಿ, ಮತಾಂತರ ನಿಷೇಧ ಮಸೂದೆಯನ್ನು ಮಂಡಿಸಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ. ಹುಬ್ಬಳ್ಳಿ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಮೂರ್ನಾಲ್ಕು ಸದಸ್ಯರು ಅಧಿವೇಶನಕ್ಕೆ ಗೈರಾಗಿದ್ದರು. ಅವರು ಬಂದಿದ್ದರೆ ಮಸೂದೆ ಮಂಡಿಸಿ ಪಾಸ್ ಮಾಡಿಸುವ ಆಲೋಚನೆ ನಮ್ಮದಾಗಿತ್ತು. ಅವರನ್ನು ಕರೆತರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹಾಗಾಗಿ, ನ್ಯಾಯಸಮ್ಮತವಾಗಿ ಮುಂದಿನ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಿದ್ದೇವೆ ಎಂದರು.

ಮಿತಿ ಮೀರಿದ ವರ್ತನೆ
ಪ್ರತಿಪಕ್ಷದವರು ಹೀಗೆಯೇ ಆಗಬೇಕು ಎಂಬ ಹಠದ ಧೋರಣೆಯಿಂದ, ಸಭಾಪತಿ ಸ್ಥಾನದ ಘನತೆ ಮರೆತು, ಬಸವರಾಜ ಹೊರಟ್ಟಿ ಅವರೊಂದಿಗೆ ಮಿತಿಮೀರಿ ವರ್ತಿಸಿದ್ದಾರೆ. ಇದು ಹೊರಟ್ಟಿ ಅವರಿಗೆ ನೋವುಂಟು ಮಾಡಿದೆ. ಹೀಗಾಗಿ ರಾಜೀನಾಮೆಗೂ ಅವರು ಮುಂದಾದರು. ನಾನು ಅವರನ್ನು ಸಮಾಧಾನಪಡಿಸಿದೆ. ಬಳಿಕ, ಪ್ರತಿಪಕ್ಷಗಳ ನಾಯಕರು ವಿಷಾದ ವ್ಯಕ್ತಪಡಿಸಿದರು. ಸದನದ ಸಮಯ ಎಲ್ಲರದ್ದು ಎಂದು ಅರಿತು ನಡೆದುಕೊಂಡರೆ ಇಂತಹ ಘಟನೆಗಳಿಗೆ ಆಸ್ಪದವಿರುವುದಿಲ್ಲ ಎಂದರು.

- Advertisement -

1 COMMENT

  1. ಉಡುಪಿಯಲ್ಲಿ ಹುಚ್ಚು ನಾಯಿಯ ವ್ಯಾನ್ ಇಲ್ಲ…ಅದು ಇದ್ದಿದ್ದರೆ ಈ ಸೂರ್ಯ ನಾಯಿ ಆ ಹುಚ್ಚುನಾಯಿ ಪಟ್ಟಿಗೆ ಸೇರುತ್ತಿತ್ತು.

LEAVE A REPLY

Please enter your comment!
Please enter your name here

Most Popular

Recent Comments