ಬೆಂಗಳೂರು : ಬಿಟ್ ಕಾಯಿನ್ ಗಾಗಿ ಹ್ಯಾಕರ್ಸ್ ಗಳು ಸರ್ಕಾರಿ ಸಂಸ್ಥೆಯ ಸಾಫ್ಟ್ ವೇರ್ ನ್ನು ಲಾಕ್ ಮಾಡಿದ ಘಟನೆ ನಡೆದಿದೆ. ಸಾಫ್ಟ್ ವೇರ್ ಲಾಕ್ ಮಾಡಿ ಬಿಟ್ ಕಾಯಿನ್ ಗೆ ನೀಡುವಂತೆ ಡಿಮಾಂಡ್ ಮಾಡಿದ್ದಾರೆ ಎನ್ನಲಾಗಿದೆ.
ಉಡುಪಿ ಪವರ್ ಕಾರ್ಪೋರೇಷನ್ನ ಸಾಫ್ಟ್ ವೇರ್ ಲಾಕ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.ಸಾಫ್ಟ್ ವೇರ್ ಲಾಕ್ ಮಾಡಿ ಕಂಪ್ಯೂಟರ್ ನಲ್ಲಿದ್ದ ಮಹತ್ವದ ಮಾಹಿತಿ ನಾಶಗೊಳಿಸಿದ,ನಂತರಸಾಫ್ಟ್ ವೇರ್ ಲಾಕ್ ಮಾಡಿ ಹ್ಯಾಕರ್ಸ್ ಮೆಸೇಜ್ ಮಾಡಿದ್ದಾರೆ ಎಂದು ತಿಳಿಯಲಾಗಿದೆ.
ಬಿಟ್ ಕಾಯಿನ್ ಮತ್ತು ಹಣ ನೀಡುವಂತೆ ಡಿಮಾಂಡ್.ಕಳೆದ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ನಡೆದ ಘಟನೆ.ಕೊರೊನಾ ಹಾವಳಿಯಿಂದಾಗಿ ದೂರು ನೀಡದ ಉಡುಪಿ ಪವರ್ ಕಾರ್ಪೋರೇಷನ್.
ಜನವರಿ 29 ರಂದು ಬೆಂಗಳೂರು ಸಿಐಡಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಉಡುಪಿ ಪವರ್ ಕಾರ್ಪೋರೇಷನ್ ಅಸೋಸಿಯೇಟ್ ಜನರಲ್ ಮ್ಯಾನೇಜರ್ ದೂರು ನೀಡಿದ್ದಾರೆ.
ಅಪರಿಚಿತ ಹ್ಯಾಕರ್ಸ್ ವಿರುದ್ಧ ಬೆಂಗಳೂರು ನಗರದ ಶೇಷಾದ್ರಿಪುರಂನಲ್ಲಿರುವ ಉಡುಪಿ ಪವರ್ ಕಾರ್ಪೋರೇಷನ್ ಕಚೇರಿಯವರು ದೂರು ನೀಡಿದ್ದಾರೆ.