ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ವಾಗ್ದಾಳಿ
ಸಿದ್ದರಾಮಯ್ಯ ಅವರ ಹತ್ರ ಏನೂ ಕೂಡಾ ಇಲ್ಲ…
ಸಿಡಿ ಬಗ್ಗೆ ತನಿಖೆ ಮಾಡಲಿ ಸರ್ಕಾರ ಹಸ್ತಕ್ಷೇಪ ಮಾಡಲ್ಲ…
ಮಂಗಳೂರು: ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಕೇಂದ್ರ ಸಚಿವ ಸದಾನಂದಗೌಡ ಮಂಗಳೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವ್ರು, ಮಾಜಿ ಸಿಎಂ ಸಿದ್ಧರಾಮಯ್ಯ ಹತ್ರ ಏನು ಕೂಡ ಇಲ್ಲ. ಸಿದ್ಧರಾಮಯ್ಯ ಖಾಲಿ ಬೂಟಾಟಿಕೆ ಮಾಡುತ್ತಾರೆ. ಸಿದ್ಧರಾಮಯ್ಯ ಸದನದಲ್ಲಿ ಚರ್ಚೆ ಮಾಡೋಕೆ ಬಿಡುವುದಿಲ್ಲ.
ಸಿದ್ಧರಾಮಯ್ಯ ಬಾಯಿಗೆ ಬಂದ ಹಾಗೆ ಮಾತನಾಡೋದು ಅವರಿಗೆ ಶೋಭೆ ತರಲ್ಲ. ಸಿ.ಡಿ.ಬಗ್ಗೆ ತನಿಖೆ ಆಗಲಿ ನಾವು ಯಾವುದೇ ರೀತಿ ಹಸ್ತಕ್ಷೇಪ ಮಾಡುವುದಿಲ್ಲ. ಯಾರೋ ಬ್ಲಾಕ್ ಮೇಲ್ ಮಾಡಿದ್ರೆ ಪಕ್ಷಕ್ಕೆ ಮುಜುಗರವಾಗಿದೆ ಅಂತ ಸರಕಾರ ನಡೆಸದೆ ಇರೋಕೆ ಆಗುತ್ತಾ ಅಂತ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ರು.