- Advertisement -
ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಕ್ಯಾಸಲರಾಕ್ ಸಮೀಪ ಅರಣ್ಯದಲ್ಲಿ ಅನುಮಾನಾಸ್ಪದವಾಗಿ ರೈಫಲ್ ಮತ್ತು ವಸ್ತುಗಳು ಇರುವ ಚೀಲ ಪತ್ತೆಯಾಗಿದೆ.
2 ಚೀಲಗಳು ಹಾಗೂ 1 ರೈಫಲ್ ಪತ್ತೆಯಾಗಿದೆ.
ಸ್ಥಳಕ್ಕೆ ಅರಣ್ಯ ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳ ಭೇಟಿ ನೀಡಿ ಅನುಮಾನಾಸ್ಪದ ವಸ್ತುಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ದಾಂಡೇಲಿ ಡಿವೈಎಸ್ಪಿ ಕೆ.ಎಲ್.ಗಣೆಶ, ಜೊಯಿಡಾ ಸಿಪಿಐ ಬಾಬಾ ಸಾಹೆಬ್ ಹುಲ್ಲಣ್ಣನವರ್,ಶ್ವಾನದಳ ಹಾಗೂ ಬೆರಳಚ್ಚು ತಂಡದಿಂದಲೂ ಭೇಟಿ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.