- Advertisement -
ವೇಣೂರಿಂದ ಪೇಟೆಗೆ ಹೋದ ಶೀನ ಎಲ್ಲಿ ಹೋದರು?
ವೇಣೂರಿನಿಂದ ಶೀನ ನಾಪತ್ತೆ ಹಿಂದೆ ಯಾರು?
ವೇಣೂರು: ಮೂಡಿಗೆರೆ ಭೂತನಕಾಡು ಎಸ್ಟೇಟ್‌ನಲ್ಲಿ ವಾಸವಾಗಿದ್ದ ವೇಣೂರು ಶಿವಾಜಿನಗರ ನಿವಾಸಿ ಶೀನ (43.ವ) ರವರು ನಾಪತ್ತೆಯಾಗಿರುವ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೈವಗಳ ಕಾರ್ಯಕ್ರಮದ ನಿಮಿತ್ತ ಊರಿಗೆ ಬಂದಿದ್ದ ಶೀನ ರವರು ಸಹೋದರಿ ಮನೆಯಲ್ಲಿ ಊಟ ಮುಗಿಸಿ ಪೇಟೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಇದುವರೆಗೂ ಮರಳಿ ಬಾರದೆ ನಾಪತ್ತೆಯಾಗಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.