Tuesday, September 28, 2021
HomeUncategorizedಆರೋಗ್ಯಅತೀ ಶೀಘ್ರದಲ್ಲಿ ಮಕ್ಕಳಿಗೆ ಸಿಗಲಿದೆ ಕೊರೋನಾ ಲಸಿಕೆ…ಆರೋಗ್ಯ ಸಚಿವರಿಂದ ಮಹತ್ವದ ಮಾಹಿತಿ…

ಅತೀ ಶೀಘ್ರದಲ್ಲಿ ಮಕ್ಕಳಿಗೆ ಸಿಗಲಿದೆ ಕೊರೋನಾ ಲಸಿಕೆ…ಆರೋಗ್ಯ ಸಚಿವರಿಂದ ಮಹತ್ವದ ಮಾಹಿತಿ…

- Advertisement -
Renault
- Advertisement -
Home Plus
- Advertisement -

ನವದೆಹಲಿ : ಭಾರತದಲ್ಲಿ ಕೊರೋನಾ ಮೂರನೇ ಅಲೆ ಮಕ್ಕಳನ್ನು ಹೆಚ್ಚಾಗಿ ಬಾಧಿಸಲಿದೆ ಎಂಬ ವಿಷಯ ಆತಂಕ ಮೂಡಿಸಿರುವ ಮಧ್ಯೆಯೇ, ಮಕ್ಕಳಿಗೆ ಲಸಿಕೆ ಯಾವಾಗಿನಿಂದ ಲಭಿಸಲಿದೆ ಎಂಬುದನ್ನು ಸಾರ್ವಜನಿಕರು ನಿರೀಕ್ಷೆಯಿಂದ ನೋಡುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವೀಯ ಮಾಹಿತಿಯೊಂದನ್ನು ನೀಡಿದ್ದಾರೆ.

ದೇಶಾದ್ಯಂತ ಶಾಲೆಗಳ ಮರು ಆರಂಭದ ಹಿನ್ನೆಲೆಯಲ್ಲಿ ಕೊರೋನಾ ಸೋಂಕು ಹರಡುವಿಕೆಯ ಸರಪಳಿಯನ್ನು ತುಂಡರಿಸುವ ಕುರಿತಂತೆ ಮಹತ್ವದ ಹೆಜ್ಜೆ ಇಡಲಾಗುತ್ತಿದೆ. ಅದರಲ್ಲೂ ಕೊರೋನಾ ಮೂರನೇ ಅಲೆ ಸೆಪ್ಟೆಂಬರ್​-ಅಕ್ಟೋಬರ್​ನಲ್ಲಿ ದೇಶದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವರು ತಿಳಿಸಿದ್ದಾರೆ. ಸದ್ಯದಲ್ಲೇ ಭಾರತದಲ್ಲಿ ಲಸಿಕೆ ತಯಾರಿಕೆಗಾಗಿ ಬಹಳಷ್ಟು ಕಂಪನಿಗಳಿಗೆ ಪರವಾನಗಿ ಸಿಗಲಿವೆ. ಮಾತ್ರವಲ್ಲ ಲಸಿಕೆ ತಯಾರಿಸುವ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಮಾತ್ರವಲ್ಲ, ಸೆಪ್ಟೆಂಬರ್​ನಲ್ಲೇ ಕರೊನಾ ಮೂರನೇ ಅಲೆ ಪ್ರವೇಶ ಸಾಧ್ಯತೆ ಹಿನ್ನೆಲೆಯಲ್ಲಿ ಸರ್ಕಾರ ಮಕ್ಕಳಿಗೆ ಬಹುತೇಕ ಮುಂದಿನ ತಿಂಗಳಲ್ಲೇ ಲಸಿಕೆಯನ್ನು ನೀಡಲಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments