ಮುಂಬೈ: ಸ್ಟಾರ್ ದಂಪತಿ ವಿರುಷ್ಕಾ ತಮ್ಮ ಮಗಳಿಗೆ ಇಟ್ಟಿರುವ ಹೆಸರನ್ನು ಇಂದು ಬಹಿರಂಗಪಡಿಸಿದ್ದಾರೆ. ತಮ್ಮ ಮುದ್ದು ಮಗಳಿಗೆ ‘ವಮಿಕಾ’ ಎಂದು ನಾಮಕರಣ ಮಾಡಿದ್ದಾರೆ.
ವಿರಾಟ್ ಮತ್ತು ಅನುಷ್ಕಾ ಮಗಳ ಜೊತೆಗಿರುವ ಮೊದಲ ಫೋಟೋವನ್ನು ಅನುಷ್ಕಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಾವು ಜೀವನದಲ್ಲಿ ಪ್ರೀತಿ, ಉಪಸ್ಥಿತಿ ಮತ್ತು ಕೃತಜ್ಞತೆಯೊಂದಿಗೆ ಒಟ್ಟಿಗೆ ವಾಸಿಸುತ್ತಿದ್ದೇವೆ. ಆದರೆ ಈ ಪುಟ್ಟ ‘ವಮಿಕಾ’ ಅದನ್ನು ಸಂಪೂರ್ಣ ಹೊಸ ಮಟ್ಟಕ್ಕೆ ಕೊಂಡೊಯ್ದಿದ್ದಾಳೆ. ಕಣ್ಣೀರು, ನಗು, ಚಿಂತೆ, ಆನಂದ, ಕೆಲವೊಮ್ಮೆ ಅನುಭವಿಸಿದ ಭಾವನೆಗಳು, ನಿದ್ರೆಯು ಸಹ ಅಸ್ಪಷ್ಟವಾಗಿದೆ. ಆದರೆ ನಮ್ಮ ಹೃದಯಗಳು ತುಂಬಿವೆ ಎಂದು ಮಗಳ ಕುರಿತು ಅನುಷ್ಕಾ ಬರೆದುಕೊಂಡಿದ್ದಾರೆ. ಇದರೊಂದಿಗೆ ತನ್ನ ಅಭಿಮಾನಿಗಳಿಗೂ ಅನುಷ್ಕಾ ಧನ್ಯವಾದ ಹೇಳಿದ್ದಾರೆ.
ಜನವರಿ 11ರಂದು ಬೆಳಗ್ಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅನುಷ್ಕಾ ಗರ್ಭಿಣಿ ಆಗಿರುವ ವಿಚಾರವನ್ನು 2020ರ ಆಗಸ್ಟ್ನಲ್ಲಿ ಘೋಷಿಸಿದ್ದರು.
ಅನುಷ್ಕಾ-ವಿರಾಟ್ ದಂಪತಿಯ ಮಗುವನ್ನು ಕರೊನಿಯಲ್ ಎಂದು ಕರೆಯಲಾಗುತ್ತದೆ. ಏಕೆಂದರೆ ಕೋವಿಡ್-10 ಕ್ವಾರಂಟೈನ್ ಅವಧಿಯಲ್ಲಿ ಅವರ ಗರ್ಭಿಣಿಯಾಗಿದ್ದರು. ಅಲ್ಲದೆ ಈ ಕರೊನಾ ಅವಧಿಯಲ್ಲಿ ಗರ್ಭವತಿಯಾಗಿರುವವರು ಜನ್ಮ ನೀಡಿರುವ ಮಕ್ಕಳನ್ನು ಕೋವಿಡ್ ಕಿಡ್ಸ್ ಎಂದೂ ಕರೆಯಲಾಗುತ್ತದೆ. ಈ ಕುರಿತು ಸ್ವತಃ ವಿರಾಟ್ ಕೊಹ್ಲಿ ಈ ಹಿಂದೆ ಪೋಸ್ಟ್ ಮಾಡಿದ್ದರು.