Friday, May 14, 2021
HomeUncategorizedಆರೋಗ್ಯ ರಕ್ಷಣೆ ಉದ್ಯಮದ ಬಲವರ್ಧನೆಗೆ ವಾಧ್ವಾನಿ ಅಡ್ವಾಂಟೇಜ್‍ನಿಂದ ವಿಶೇಷ ಕಾರ್ಯಕ್ರಮ

ಆರೋಗ್ಯ ರಕ್ಷಣೆ ಉದ್ಯಮದ ಬಲವರ್ಧನೆಗೆ ವಾಧ್ವಾನಿ ಅಡ್ವಾಂಟೇಜ್‍ನಿಂದ ವಿಶೇಷ ಕಾರ್ಯಕ್ರಮ

- Advertisement -
Rental
Rental
- Advertisement -Home Plus
- Advertisement -
Platform
Maya Builders

ಬೆಂಗಳೂರು : ಜಾಗತಿಕ ಆರೋಗ್ಯ, ಆರ್ಥಿಕತೆ ಮತ್ತು ಸಮಾಜದ ಮೇಲೆ ಕೋವಿಡ್ ಸಾಂಕ್ರಾಮಿಕವು ಗಂಭೀರ ಸ್ವರೂಪದಲ್ಲಿ ನಕಾರಾತ್ಮಕ ಪರಿಣಾಮವನ್ನು ಬೀರಿದೆ. ಈ ಹಿನ್ನೆಲೆಯಲ್ಲಿ ಔಷಧ ಕಂಪನಿಗಳು ಮತ್ತು ಪರಿಣತರು ಅನೇಕ ಅವಕಾಶಗಳನ್ನು ಆವಿಷ್ಕರಿಸಿದ್ದಾರೆ ಮತ್ತು ಆರೋಗ್ಯರಕ್ಷಣೆ ಉದ್ಯಮಕ್ಕೊಂದು ಭವಿಷ್ಯವನ್ನು ನಿರ್ಮಾಣ ಮಾಡುವತ್ತ ಗಮನಹರಿಸುತ್ತಿದ್ದಾರೆ.

ಈ ಪ್ರಕ್ರಿಯೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ವಾಧ್ವಾನಿ ಅಡ್ವಾಂಟೇಜ್ ಪ್ರೋಗ್ರಾಂ ಆರೋಗ್ಯ ರಕ್ಷಣೆ ಕ್ಷೇತ್ರದ ವ್ಯವಹಾರಗಳನ್ನು ಸಬಲೀಕರಣಗೊಳಿಸಲು ಕ್ರಮವಹಿಸಿದೆ. ಬ್ಯುಸಿನೆಸ್ ಡಿಸ್ಕವರಿ ಅಂಡ್ ಟ್ರಾನ್ಸ್‍ಫಾರ್ಮೇಶನ್ ಟೂಲ್ಸ್ ನೆರವಿನಿಂದ ಆರೋಗ್ಯ ಕ್ಷೇತ್ರದ ವ್ಯವಹಾರಗಳಲ್ಲಿ ತಮ್ಮ ಸಾಮಥ್ರ್ಯಗಳನ್ನು 2 ರಿಂದ 10 ಪಟ್ಟು ಹೆಚ್ಚಳ ಮಾಡಿಕೊಂಡು ಆರ್ಥಿಕ ಪ್ರಗತಿಯನ್ನು ಹೊಂದುವಂತೆ ಮಾಡಲು ವಾಧ್ವಾನಿ ಅಡ್ವಾಂಟೇಜ್ ನೆರವಾಗಲಿದೆ. ವಾಧ್ವಾನಿ ಅಡ್ವಾಂಟೇಜ್ ಕಾರ್ಯಕ್ರಮದಲ್ಲಿ 1 ರಿಂದ 12 ತಿಂಗಳ ಪಾಲ್ಗೊಳ್ಳುವಿಕೆ ಮತ್ತು ಮೂರು ವರ್ಷಗಳವರೆಗಿನ ಬೆಂಬಲವನ್ನು ನೀಡಲಾಗುತ್ತದೆ. ಅಂದರೆ ವೈಯಕ್ತಿಕ ಕೃತಕ ಬುದ್ಧಿಮತ್ತೆ ಅಂದರೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮೂಲಕ ವ್ಯವಹಾರಗಳಿಗೆ ವೇಗ ನೀಡುವಂತೆ ಮಾಡಲಿದೆ.

ಈ ಕಾರ್ಯಕ್ರಮವು ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿನ ವ್ಯವಹಾರಗಳನ್ನು ಪ್ರಗತಿ ಕಾಣಲು ಪೂರಕವಾದ ಯೋಜನೆಗಳನ್ನು ನೀಡುವ ಉದ್ದೇಶವನ್ನು ಹೊಂದಿದೆ. ಅಲ್ಲದೇ, ಆದಾಯ ಹೆಚ್ಚಳ ಮತ್ತು ಮುಕ್ತ ನಗದು ಹರಿವಿನ ಮಾರ್ಗಗಳ ಪರಿಹಾರಗಳನ್ನು ಒದಗಿಸುವ ಮೂಲಕ `ಡೂ-ಇಟ್-ಯುವರ್‍ಸೆಲ್ಫ್’(ಡಿಐವೈ) ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳುವ ಪರಿಹಾರಗಳನ್ನು ನೀಡಲಿದೆ. ಬ್ಯುಸಿನೆಸ್ ಸಲೂಶನ್ ಟೂಲ್ ಕಿಟ್ಸ್ ಮತ್ತು ಇತರೆ ಜ್ಞಾನಾಧಾರಿತ ಸಂಪನ್ಮೂಲಗಳು ಎಐ ಆಧಾರಿತ ಆಟೋಮೇಟೆಡ್ ಲಾಜಿಕ್ ಮತ್ತು ಪರ್ಸನಲೈಸ್ಡ್ ಇಂಟರ್‍ವೆನ್ಷನ್‍ಗಳನ್ನು ಬಳಸಿಕೊಳ್ಳಲಿವೆ. ಈ ದಿಸೆಯಲ್ಲಿ ವಾಧ್ವಾನಿ ಅಡ್ವಾಂಟೇಜ್ ಅಸೋಸಿಯೇಷನ್ ಆಫ್ ಇಂಡಿಯನ್ ಮೆಡಿಕಲ್ ಡಿವೈಸ್ ಇಂಡಸ್ಟ್ರಿ (ಎಐಎಂಇಡಿ), ವಾಯ್ಸ್ ಆಫ್ ಹೆಲ್ತ್‍ಕೇರ್(ವಿಒಎಚ್) ಹಾಗೂ ಕ್ಸೆಂಟಿಯೋ ವಿಕಾಸದಂತಹ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಈ ಕಾರ್ಯಕ್ರಮದ ಪ್ರಯೋಜನ ಪಡೆಯಲು ಬಯಸುವ ವ್ಯವಹಾರಸ್ಥರು
http://bit.ly/WAProgramApplication-MarketingCampaign ಈ ವೆಬ್‍ಸೈಟ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಯಾವುದೇ ವಾಣಿಜ್ಯ ನಿರೀಕ್ಷೆಗಳಿಲ್ಲದೇ ವ್ಯವಹಾರ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ವಾಧ್ವಾನಿ ಅಡ್ವಾಂಟೇಜ್ ಯಾವುದೇ ಶುಲ್ಕವನ್ನು ವಿಧಿಸದೇ ಅತ್ಯುನ್ನತ ಗುಣಮಟ್ಟದ ಮಧ್ಯಸ್ಥಿಕೆ ಪರಿಹಾರಗಳನ್ನು ಒದಗಿಸಲಿದೆ. ನುರಿತ ಸಲಹೆಗಾರರು ಅಗತ್ಯವಿದ್ದರೆ ವ್ಯವಹಾರಗಳಿಗೆ ತಮ್ಮ ರೂಪಾಂತರ ಪಯಣವನ್ನು ಅಥವಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹಾಗೂ ವಾಧ್ವಾನಿ ಅಡ್ವಾಂಟೇಜ್‍ನಿಂದ ಪ್ರಮಾಣೀಕರಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಸ್ನೇಹಶೀಲ ಮತ್ತು ಸಬ್ಸಿಡಿ ದರದಲ್ಲಿ ಶುಲ್ಕಗಳನ್ನು ವಿಧಿಸುತ್ತಾರೆ.

ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ವಾಧ್ವಾನಿ ಫೌಂಡೇಷನ್‍ನ ವಾಧ್ವಾನಿ ಅಡ್ವಾಂಟೇಜ್‍ನ ಕಾರ್ಯಕಾರಿ ಉಪಾಧ್ಯಕ್ಷ ಸಮೀರ್ ಸಾಥೆ ಅವರು, “ವಾಧ್ವಾನಿ ಫೌಂಡೇಷನ್‍ಗೆ ಆರೋಗ್ಯ ರಕ್ಷಣೆ ಕ್ಷೇತ್ರವು ಆದ್ಯತೆಯ ಕ್ಷೇತ್ರವಾಗಿದೆ. ಈ ಕಾರ್ಯಕ್ರಮವು ಉದ್ದಿಮೆಗಳ ಪ್ರಗತಿಯಲ್ಲಿ ವೇಗ ಪಡೆದುಕೊಳ್ಳಲು ನೆರವಾಗುತ್ತದೆ. ಭಾರತದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಆರೋಗ್ಯರಕ್ಷಣೆ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲಿದೆ. ಈ ಕಾರ್ಯಕ್ರಮದ ಮೂಲಕ ನಾವು ಭಾರತದಲ್ಲಿನ ಆರೋಗ್ಯ ರಕ್ಷಣೆ ಕ್ಷೇತ್ರಕ್ಕೆ ಬೆಂಬಲವನ್ನು ನೀಡುವುದು ಮತ್ತು ಉದ್ದಿಮೆಗಳ ವ್ಯವಹಾರಗಳನ್ನು ಸಬಲಗೊಳಿಸುವ ಮೂಲಕ ಬಲವರ್ಧನೆ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೇವೆ. ಈ ದಿಸೆಯಲ್ಲಿ ನಾವು ಪ್ರಮುಖ ಆರೋಗ್ಯ ರಕ್ಷಣೆ ಪರಿಸರ ವ್ಯವಸ್ಥೆಯ ಪಾಲುದಾರರೊಂದಿಗೆ ಸಹಭಾಗಿತ್ವ ಹೊಂದುವ ಉದ್ದೇಶ ಹೊಂದಿದ್ದೇವೆ. ಈ ಮೂಲಕ ಜಂಟಿಯಾಗಿ ಆರೋಗ್ಯ ರಕ್ಷಣೆ ಕ್ಷೇತ್ರದ ವ್ಯವಹಾರಗಳನ್ನು ಪ್ರತಿನಿಧಿಸುವುದು ಮತ್ತು ಅವುಗಳ ಬಲವರ್ಧನೆಗೆ ಪೂರಕವಾಗಿ ಕೆಲಸ ಮಾಡಲಿದ್ದೇವೆ’’ ಎಂದು ತಿಳಿಸಿದರು.

ವಾಧ್ವಾನಿ ಅಡ್ವಾಂಟೇಜ್ ತನ್ನದೇ ಆದ ವಾಧ್ವಾನಿ ಸೂಚ್ಯಂಕ ಮತ್ತು ಸ್ಕೋರಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಅದು ವ್ಯವಹಾರಗಳಿಗೆ ಕಾರ್ಯಕ್ಷಮತೆಯ ಸುಧಾರಣೆಗೆ ಗುರಿಗಳನ್ನು ನಿಗದಿಪಡಿಸಲಿದೆ. ತನ್ನದೇ ಆದ ಸ್ವಯಂಚಾಲಿತ ಅನ್ವೇಷಣೆಯ ಸಾಧನವು 27 ಪ್ರಮುಖವಾದ ಕಾರ್ಯಕ್ಷಮತೆ ಸೂಚಕಗಳ ಆಧಾರದ ಮೇಲೆ ಕಾರ್ಯಕ್ಷಮತೆಯನ್ನು ಅಳೆಯಲು ವ್ಯವಹಾರಗಳಿಗೆ ಅವಕಾಶ ಕಲ್ಪಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ 8 ಅಂಶಗಳೆಂದರೆ, ಹಿಂದಿನ 7 ತ್ರೈಮಾಸಿಕಗಳಲ್ಲಿ ಮತ್ತು ಭವಿಷ್ಯದಲ್ಲಿ ಹಾಗೂ ಈ ಕಂಪನಿಗಳನ್ನು ಹೋಲಿಸುವ ನಿಟ್ಟಿನಲ್ಲಿಯೂ ಸಹ ಅನುಮತಿ ನೀಡುತ್ತದೆ. ಬದ್ಧತೆ ಇರುವ ಸಲಹೆಗಾರರು ಈ ಕಾರ್ಯಕ್ರಮದಲ್ಲಿದ್ದು, ಇವರು ಈ ಟೂಲ್ ಅನ್ನು ಬಳಸಿಕೊಂಡು ವ್ಯವಹಾರಗಳ ಪ್ರಗತಿಗೆ ನೆರವಾಗಲಿದ್ದಾರೆ ಮತ್ತು ಉದ್ಯಮದಲ್ಲಿ ನಾಯಕತ್ವ ವಹಿಸಿಕೊಳ್ಳಲು ಅಗತ್ಯವಾದ ಸಲಹೆಗಳನ್ನು ನೀಡುತ್ತಾರೆ.

ವಾಧ್ವಾನಿ ಅಡ್ವಾಂಟೇಜ್ ಕಾರ್ಯಕ್ರಮವು ಹತ್ತಾರು ಸನ್ನಿವೇಶಗಳ ಆಧಾರದ ಮೇಲೆ ರೂಪಿತವಾಗಿದೆ. ಸಣ್ಣ ಉದ್ಯಮಗಳು ತಮ್ಮ ಬೆಳವಣಿಗೆಯನ್ನು ಪರಿವರ್ತಿಸಿಕೊಳ್ಳಲು ಮತ್ತು ವ್ಯವಹಾರಗಳನ್ನು ವೇಗಗೊಳಿಸಿಕೊಳ್ಳಲು ಅಗತ್ಯವಾಗಿ ಕೈಗೊಳ್ಳಬೇಕಾದ ಸೂಕ್ತವಾದ ರೂಪಾಂತರ ಯೋಜನೆಗಳನ್ನು ಶಿಫಾರಸು ಮಾಡಲು ಸ್ವಯಂ ಚಾಲಿತವಾದ ಬುದ್ಧಿಮತ್ತೆ ಮತ್ತು ತತ್ತ್ವವನ್ನು ಬಳಸಿಕೊಂಡಿದೆ.
ಈ ಕಾರ್ಯಕ್ರಮದ ಪ್ರಯೋಜನ ಪಡೆಯಲು ಬಯಸುವ ವ್ಯವಹಾರಸ್ಥರು .

http://bit.ly/WAProgramApplication-MarketingCampaign ಈ ವೆಬ್‍ಸೈಟ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

About Wadhwani Advantage:

Wadhwani Advantage is an Initiative of Wadhwani Foundation, a global philanthropy; it empowers business entrepreneurs with capabilities to realize their business growth potential through a personalized AI-led acceleration program. The automated business consulting services provided by Wadhwani Advantage aim to maximize the growth potential of businesses. The program includes 1-12 months of engagement to help achieve acceleration in business growth and offers up to three years of hand-holding support enabled through the Wadhwani AI-enabled technology platform.

- Advertisement -Hunger

LEAVE A REPLY

Please enter your comment!
Please enter your name here

- Advertisment -

Most Popular

Recent Comments