Monday, October 2, 2023
Homeಕರಾವಳಿಮೂಡಬಿದಿರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿ ದರೋಡೆ >> ಮೂವರ ಬಂಧನ

ಮೂಡಬಿದಿರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿ ದರೋಡೆ >> ಮೂವರ ಬಂಧನ

- Advertisement -



Renault

Renault
Renault

- Advertisement -

ಮಂಗಳೂರು: ಮೂಡಬಿದಿರೆಯಲ್ಲಿ ಆ.30ರಂದು ಮಹಿಳೆ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಡಬಿದ್ರಿಯ ಬಡಗ ಮಿಜಾರ್ ಗ್ರಾಮದ ನಿವಾಸಿ ದಿನೇಶ್ ಪೂಜಾರಿ (36), ಬೆಳ್ತಂಗಡಿ ತಾಲೂಕಿನ ಉಳ್ಳಗುಡ್ಡೆ ಹೊಸಮನೆ ನಿವಾಸಿ ಸುಕೇಶ್ ಪೂಜಾರಿ (32), ಮೂಡಬಿದ್ರಿಯ ನಿರ್ಪಣ ದಡ್ಕೆ ನಿವಾಸಿ ಹರೀಶ್ ಪೂಜಾರಿ (34) ಬಂಧಿತ ಆರೋಪಿಗಳು.

ವರದಿಯ ಪ್ರಕಾರ, ಆಗಸ್ಟ್ 30, ಮಂಗಳವಾರ ರಾತ್ರಿ 10:30 ರ ಸುಮಾರಿಗೆ ಈ ಮೂವರು ಮೂಡಬಿದ್ರಿಯ ಅಶ್ವಥಪುರದ ಬೇರಿಂಜೆ ಗುಡ್ಡೆ ನಿವಾಸಿ ಕಮಲಾ ಎಂಬ ಒಂಟಿ ಮಹಿಳೆಯ ಮನೆಗೆ ನುಗ್ಗಿದ್ದರು. ಕಮಲಾ ಅವರ ಮೇಲೆ ಮಚ್ಚಿನಿಂದ ದೈಹಿಕ ಹಲ್ಲೆ ನಡೆಸಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಈ ಕುರಿತು ಮೂಡಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಮಾರಲು ದುಷ್ಕರ್ಮಿಗಳು ಮಂಗಳೂರಿಗೆ ತೆರಳುತ್ತಿದ್ದಾಗ, ಕುಲಶೇಖರ್ ಚರ್ಚ್ ಗೇಟ್ ಬಳಿ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಸುಮಾರು 4.5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳವು ಮಾಡಿದ ಆಭರಣಗಳು, ಎರಡು ಸ್ಕೂಟರ್‌ಗಳು, ಮೂರು ಮೊಬೈಲ್‌ಗಳನ್ನು, ಒಂದು ಮಚ್ಚು, ಎರಡು ಮಂಕಿ ಕ್ಯಾಪ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

- Advertisement -

1 COMMENT

  1. ಇಂತಹ ಕಳ್ಳ ಕಾಕರನ್ನು ದರೋಡೆಕೋರ ರನ್ನು ಗ್ರೈಂಡರ್ ನಲ್ಲಿ ಹಾಕಿ ರುಬ್ಬಬೇಕೆನಿಸುತ್ತದೆ ಇವರಿಗೆ ದುಡಿದು ಮರ್ಯಾದೆಯಲ್ಲಿ ಜೀವನ ಸಾಗಲಿಕ್ಕೆ ಏನು ಮಂಡೆ ಮಾರಿ

LEAVE A REPLY

Please enter your comment!
Please enter your name here

Most Popular

Recent Comments