Saturday, September 30, 2023
HomeUncategorizedದೈಹಿಕ ಸಂಭೋಗದ ನೆಪದಲ್ಲಿ ಮಂಚಕ್ಕೆ ಕಟ್ಟಿ ಮಹಿಳೆ ಮೇಲೆ ವಿಕೃತಿ…!!!

ದೈಹಿಕ ಸಂಭೋಗದ ನೆಪದಲ್ಲಿ ಮಂಚಕ್ಕೆ ಕಟ್ಟಿ ಮಹಿಳೆ ಮೇಲೆ ವಿಕೃತಿ…!!!

- Advertisement -Renault

Renault
Renault

- Advertisement -

ಇದು ಕಿರಾತಕರು ಬಿಚ್ಚಿಟ್ಟ ಭಯಾನಕ ಸತ್ಯ…!!!

ಮಂಡ್ಯ: ಮದ್ದೂರು ಪಟ್ಟಣದಲ್ಲಿ ಫೆ. 2ರಂದು ನಡೆದಿದ್ದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಪೊಲೀಸರು ಇಬ್ಬರು ಆರೋಪಿಗಳನ್ನು ಭಾನುವಾರ ಬಂಧಿಸಿದ್ದಾರೆ.

ಪಟ್ಟಣದ ವಿಶ್ವೇಶ್ವರಯ್ಯ ನಗರದ 9ನೇ ಕ್ರಾಸ್​ನಲ್ಲಿ ವಾಸವಿದ್ದ ಪೂರ್ಣಿಮಾರನ್ನು ಫೆ.2 ರಂದು ದುಷ್ಕರ್ಮಿಗಳು ರೇಪ್​ ಮಾಡಿ ಬೆಡ್​ಶೀಟ್​ನಿಂದ ಕುತ್ತಿಗೆ ಬಿಗಿದು, ಅದರಿಂದಲೇ ಮೂಗು-ಬಾಯಿಯನ್ನು ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಹಾಗೂ ಅಪರ ಪೊಲೀಸ್ ಅಧೀಕ್ಷಕರಾದ ಧನಂಜಯ ಅವರ ಮಾರ್ಗದರ್ಶನದಲ್ಲಿ ಮಳವಳ್ಳಿ ಡಿವೈಎಸ್ಪಿ ಲಕ್ಷ್ಮಿನಾರಾಯಣ ಪ್ರಸಾದ್​ ಅವರ ನೇತೃತ್ವದಲ್ಲಿ ಮೂರು ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿತ್ತು.

ವೃತ್ತ ನಿರೀಕ್ಷಕ ಕೆ.ಆರ್.ಪ್ರಸಾದ್ ಅವರ ನೇತೃತ್ವ ತಂಡವು ಫೆ.7 ರಂದು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಬಂಧಿಸಿದ್ದಾರೆ.

ಬಂಧಿತರನ್ನು ರಾಮನಗರ ತಾಲೂಕು ಕೂಟ್ಕಲ್ ಹೋಬಳಿ ರಾಯರದೊಡ್ಡಿ (ಸ್ವಂತ ಊರು ಹೊಂಬೇಗೌಡನದೊಡ್ಡಿ) ಗ್ರಾಮದ ಎಚ್.ಆರ್.ಮನು ಅಲಿಯಾಸ್ ಮನು (23) ಹಾಗೂ ರಾಮನಗರ ತಾಲೂಕು ಕೂಟ್ಕಲ್ ಹೋಬಳಿಯ ಹೊಂಬೇಗೌಡನದೊಡ್ಡಿ ಗ್ರಾಮದ ಸಿ.ರಮೇಶ್ ಎಂದು ಗುರುತಿಸಲಾಗಿದೆ.

ಘಟನೆ ವಿವರ: ಕೊಲೆಯಾದ ಪೂರ್ಣಿಮಾರವರ ಒಡವೆ ಮತ್ತು ಹಣವನ್ನು ದೋಚುವ ದುರುದ್ದೇಶದಿಂದ ಮೃತ ಮಹಿಳೆ ಜತೆಗೆ ದೈಹಿಕ ಸಂಭೋಗ ಮಾಡುವ ನೆಪದಲ್ಲಿ ಆರೋಪಿ ಮನುಕುಮಾರ್ ಮಹಿಳೆ ಜತೆ ದೈಹಿಕ ಸಂಭೋಗ ನಡೆಸಿ, ನಂತರ ಬಾಯಿಗೆ ಬಟ್ಟೆ ತುರುಕಿ ಆಕೆಯ ಕಾಲುಗಳನ್ನು ಮಂಚದ ಕಾಲುಗಳಿಗೆ ಕಟ್ಟಿ ಕುತ್ತಿಗೆ ಮತ್ತು ಮುಖಕ್ಕೆ ಬೆಡ್​ಶೀಟ್​ ಸುತ್ತಿ ಉಸಿರುಗಟ್ಟಿಸಿ ಸಾಯಿಸಿದ್ದಾರೆ. ಬಳಿಕ ಮೃತಳ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸಮೇತ, ಚಿನ್ನದಂತಿರುವ ರೋಲ್ಡ್​ಗೋಲ್ಡ್​ ಚೈನು, ಎರಡು ಕೈಯಲ್ಲಿದ್ದ 4 ರೋಲ್ಡ್​ಗೋಲ್ಡ್​ ಬಳೆ, ಮೊಬೈಲ್ ಮತ್ತು 4500 ರೂ. ನಗದನ್ನು ಕಿತ್ತುಕೊಂಡು ಪರಾರಿಯಾಗಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಆರೋಪಿಗಳು ಕಿತ್ತುಕೊಂಡು ಹೋಗಿರುವ ವಸ್ತುಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿರುವ ಬೈಕ್​ ಅನ್ನು ತನಿಖೆ ಸಮಯದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ಶೀಘ್ರ ಪತ್ತೆ ಹಚ್ಚಿದ ಮದ್ದೂರಿನ ಪೊಲೀಸರ ಕ್ರಮಕ್ಕೆ ಎಸ್ಪಿ ಶ್ಲಾಘಿಸಿದ್ದು, ನಗದು ಬಹುಮಾನ ಘೋಷಣೆ ಮಾಡಿದ್ದಾರೆ. ಅಲ್ಲದೆ, ಭಯದಲ್ಲಿದ್ದ ಮದ್ದೂರಿನ ಜನತೆಗೆ ಕೊಂಚ ನಿರಾಳವಾಗಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments