ಕಡಬ: ನದಿಯಲ್ಲಿ ಹೆಂಗಸಿನ ಶವ ಪತ್ತೆ…
ಕಡಬ: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಕೈಕಂಬ ಎಂಬಲ್ಲಿ ಕೋಟೆ ಸಾರು ನದಿಯಲ್ಲಿ ಸುಮಾರು 65 ರಿಂದ 70 ವಯಸ್ಸಿನ ಹೆಂಗಸಿನ ಮೃತದೇಹವು ಪತ್ತೆಯಾಗಿದೆ.
ಮೃತದೇಹದ ಸಮೀಪ ಮೃತರು ಧರಿಸಿದ ಚಪ್ಪಲಿ ಹಾಗೂ ಮೃತದೇಹದ ಕೈಯಲ್ಲಿ ಕನ್ನಡಕ ಇರುವುದು ಕಂಡುಬಂದಿದೆ. ಮೃತರು ಯಾರು ಎಂಬುದು ಪತ್ತೆಯಾಗದ ಹಿನ್ನೆಲೆಯಲ್ಲಿ ಮೃತದೇಹವನ್ನು ಮಂಗಳೂರಿನ ದೇರಳಕಟ್ಟೆಯ ಮೆಡಿಕಲ್ ಆಸ್ಪತ್ರೆಗೆ ಸಾಗಿಸಲಾಗಿದ್ದು,ಈ ಬಗ್ಗೆ ಕಡಬ ಪೋಲೀಸರು ಮಾಹಿತಿ ಪಡೆಯುತ್ತಿದ್ದಾರೆ.ಕಡಬ ಠಾಣಾ ಎಸ್ಐ ರುಕ್ಮ ನಾಯ್ಕ್ ,ಹಾಗೂ ಸಿಬ್ಬಂದಿಗಳು ಸ್ವತಃ ಸಾರ್ವಜನಿಕರ ಸಹಕಾರದೊಂದಿಗೆ ನದಿಗೆ ಇಳಿದು ಮೃತದೇಹವನ್ನು ಮೇಲಕ್ಕೆ ಎತ್ತಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.