ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಉದ್ಘಾಟನೆಗೆ ಸಿದ್ಧ…!!!
ಬುಧವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕ್ರೀಡಾಂಗಣ ಉದ್ಘಾಟನೆ…!!!
ಈ ಕ್ರೀಡಾಂಗಣದ ಸಾಮರ್ಥ್ಯ ಎಂತದ್ದು ಗೊತ್ತಾ…???
ಗುಜರಾತ್: ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಮೊಟೆರಾದಲ್ಲಿ ಬುಧವಾರ ಉದ್ಘಾಟನೆಗೊಳ್ಳಲಿದೆ. ಮೊಟೆರಾ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟಿಸಲಿದ್ದಾರೆ. ಈ ವೇಳೆ ಗೃಹ ಸಚಿವ ಅಮಿತ್ ಶಾ ಕೂಡ ಭಾಗಿಯಾಗಲಿದ್ದಾರೆ. ಈ ಕ್ರೀಡಾಂಗಣದ ಸಾಮರ್ಥ್ಯ ಸುಮಾರು 1.10 ಲಕ್ಷ ಜನ ಕುಳಿತುಕೊಳ್ಳಲು ಸಾಧ್ಯವಿದೆ.
ಹಾಗೆಯೇ ಈ ಸ್ಟೇಡಿಯಂಗೆ ಸುಮಾರು 800 ಕೋಟಿ ವೆಚ್ಚ ತಗುಲಿದೆ.
ಇದರಲ್ಲಿ ಕೆಂಪು ಮತ್ತು ಕಪ್ಪು ಮಣ್ಣಿನ ಹನ್ನೊಂದು ಪ್ರಾಕ್ಟಿಸ್ ಪಿಚ್ ಗಳಿವೆ. ಇದು ವಿಶ್ವದ ಸ್ಟೇಡಿಯಂಗಳ ಪೈಕಿ ಮೊದಲೆನೆಯದು.
ಇನ್ನು ಕ್ರಿಕೆಟ್ ಪಂದ್ಯಾಟದ ವೇಳೆ ಅಕಸ್ಮಾತ್ ಮಳೆ ಬಂದಾಗ ಕ್ರೀಡಾಂಗಣದಲ್ಲಿ ನೀರು ನಿಂತಲ್ಲಿ, ಅದನ್ನ ಅರ್ಧ ಗಂಟೆಯಲ್ಲಿ (dry) ಇಂಗಿಸುವಂತ ಸಾಮರ್ಥ್ಯವಿದೆ. ಇಷ್ಟೇ ಅಲ್ಲದೆ ಇನ್ನು ಹತ್ತು ಹಲವಾರು ಸಾಮರ್ಥ್ಯವನ್ನ ಹೊಂದಿದ ವಿಶ್ವದ ಮೊದಲ ಕ್ರಿಕೆಟ್ ಕ್ರೀಡಾಂಗಣವಾಗಿ ಮೊಟೆರಾ ಸಿದ್ಧವಾಗಿದೆ.